September 6, 2026
Sunday, September 6, 2026
spot_img

ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ: ಇರಾನ್-ಅಮೆರಿಕ ನಡುವೆ ಕ್ಷಿಪಣಿ, ಡ್ರೋನ್ ಗಳ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಶಾಂತವಾಗಿದ್ದ ಸಂಘರ್ಷ ಮತ್ತೆ ಶುರುವಾಗಿದ್ದು, ಉಭಯ ದೇಶಗಳು ಗುರುವಾರ ಮತ್ತೆ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.

ಹಡಗುಗಳ ಮೇಲೆ ಇರಾನ್ ದಾಳಿ

ಇರಾನ್‌ನ ಅಧಿಕೃತ ಸರ್ಕಾರಿ ಮಾಧ್ಯಮ ‘ಐಆರ್‌ಐಬಿ’ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದು, ಇರಾನ್ ಕೋಸ್ಟ್ ಗಾರ್ಡ್ಸ್ ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿ 4 ಹಡಗುಗಳು ಸ್ಟ್ರೈಟ್ ಆಫ್ ಹಾರ್ಮುಜ್ ಮೂಲಕ ಪರ್ಷಿಯನ್ ಗಲ್ಫ್ ಪ್ರವೇಶಿಸಲು ಯತ್ನಿಸಿದ್ದವು. ಈ ವೇಳೆ ಹಡಗುಗಳ ಮೇಲೆ ಇರಾನ್ ನೌಕಾಸೇನೆ ರೌಂಡ್ಸ್ ಫೈರಿಂಗ್ ನಡೆಸಿ, ಬಲವಂತವಾಗಿ ಹಿಂದಕ್ಕೆ ಓಡಿಸಿದೆ.

ಬಂದರ್ ಅಬ್ಬಾಸ್ ಮೇಲೆ ಅಮೆರಿಕ ವೈಮಾನಿಕ ದಾಳಿ

ಇತ್ತ ಇರಾನ್ ದಾಳಿಯಿಂದ ಕೆರಳಿದ ಅಮೆರಿಕವು, ತಕ್ಷಣವೇ ಇರಾನ್‌ನ ಪ್ರಮುಖ ಬಂದರು ನಗರಿ ‘ಬಂದರ್ ಅಬ್ಬಾಸ್’ ಸಮೀಪವಿರುವ ಇರಾನ್‌ನ ಅತ್ಯಾಧುನಿಕ ಡ್ರೋನ್ ನಿಯಂತ್ರಣ ಕೇಂದ್ರವನ್ನು ಗುರಿಯಾಗಿಸಿಕೊಂಡು ಭೀಕರ ವೈಮಾನಿಕ ದಾಳಿ ನಡೆಸಿದೆ. ಇದರಿಂದ ಇರಾನ್ ನ 4 ಡೆಡ್ಲಿ ಅಟ್ಯಾಕ್ ಡ್ರೋನ್‌ಗಳು ಸಂಪೂರ್ಣ ನಾಶವಾಗಿದೆ.

ಅಮೆರಿಕ ಮೇಲೆ ಇರಾನ್ ಪ್ರತಿದಾಳಿ

ಆದರೆ ಅಮೆರಿಕದ ದಾಳಿಗೆ ಸುಮ್ಮನೆ ಇರದ ಇರಾನ್ ಪ್ರತಿಯಾಗಿ ಅಮೆರಿಕ ಮಿಲಿಟರಿ ಬೇಸ್ ಮೇಲೆ ಪ್ರತಿದಾಳಿಯನ್ನು ನಡೆಸಿದೆ. ಇರಾನ್‌ನ ಸೇನೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ (IRGC) ಅಮೆರಿಕದ ಮಿಲಿಟರಿ ಬೇಸ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳ ಸುರಿಮಳೆಗರೆದಿದೆ. ಇದರಿಂದ ಕುವೈತ್ ಗಡಿಯಲ್ಲಿ ಆತಂಕ ಮನೆ ಮಾಡಿದೆ.

ಮತ್ತೆ ಜಗತ್ತಿಗೆ ಇಂಧನ ಪೂರೈಕೆಗೆ ಏಟು

ಇದರಿಂದ ವಿಶ್ವಸಂಸ್ಥೆಯ ಶಾಂತಿ ಮಾತುಕತೆಗಳು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇನ್ನೇನು ಇಂಧನ ಪೂರೈಕೆಯ ನಿರೀಕ್ಷೆಯಲ್ಲಿದ್ದ ಜಗತ್ತಿಗೆ ದೊಡ್ಡ ಪೆಟ್ಟು ಬೀಳುವ ಆತಂಕ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !