June 14, 2026
Sunday, June 14, 2026
spot_img

‘ಮಕ್ಕಳಿಗಿಂತ ನಾಯಿಗಳೇ ಬೆಸ್ಟ್, ಅವುಗಳನ್ನೇ ಸಾಕಿಕೊಳ್ಳಿ’: ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ ಶೆಫಾಲಿ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಮದುವೆ ಮತ್ತು ಸಂಬಂಧಗಳ ಬಗ್ಗೆ ನಟ-ನಟಿಯರು ಮುಕ್ತವಾಗಿ ಮಾತನಾಡುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಬಾಲಿವುಡ್ ನಟಿ ಶೆಫಾಲಿ ಶಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಯುವಕರು ಆತುರದಲ್ಲಿ ಮದುವೆಯಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದ ಅವರು, ತಮಾಷೆಯ ಶೈಲಿಯಲ್ಲಿ “ಮಕ್ಕಳಿಗಿಂತ ನಾಯಿಗಳನ್ನು ಸಾಕುವುದು ಉತ್ತಮ” ಎಂದು ಹೇಳಿದ್ದಾರೆ.

ಸಂಭಾಷಣೆಯ ವೇಳೆ ಮಾತನಾಡಿದ ಶೆಫಾಲಿ ಶಾ, “ಚಿಕ್ಕ ವಯಸ್ಸಿನಲ್ಲಿ ಮದುವೆಯ ನಿರ್ಧಾರ ತೆಗೆದುಕೊಳ್ಳಬೇಡಿ. ಆ ಸಮಯದಲ್ಲಿ ಜೀವನದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಜನರನ್ನು ಅರ್ಥಮಾಡಿಕೊಳ್ಳಿ, ನಿಮ್ಮ ಜೀವನದಲ್ಲಿ ಏನು ಬೇಕು ಎಂಬುದನ್ನು ತಿಳಿದುಕೊಳ್ಳಿ” ಎಂದು ಹೇಳಿದ್ದಾರೆ. ಮದುವೆ ಎಂಬ ವ್ಯವಸ್ಥೆಯನ್ನು ನಂಬದಿದ್ದರೆ ಒತ್ತಡಕ್ಕೆ ಒಳಗಾಗಿ ಮದುವೆಯಾಗಬಾರದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಇದೇ ವೇಳೆ ಅವರು ತಮಾಷೆಯ ಶೈಲಿಯಲ್ಲಿ, “ಮಕ್ಕಳನ್ನು ಮಾಡಿಕೊಳ್ಳುವುದಕ್ಕಿಂತ ನಾಯಿಗಳನ್ನು ಸಾಕಿ. ಅವು ಮಾತ್ರವೇ ಬೇಷರತ್ ಪ್ರೀತಿ ನೀಡುತ್ತವೆ” ಎಂದು ಹೇಳಿದ್ದು ಗಮನಸೆಳೆದಿದೆ. ಈ ಹೇಳಿಕೆ ಕೆಲವರ ಮೆಚ್ಚುಗೆಗೂ, ಕೆಲವರ ಟೀಕೆಗೂ ಕಾರಣವಾಗಿದೆ.

ಶೆಫಾಲಿ ಶಾ ಅವರ ವೈಯಕ್ತಿಕ ಜೀವನವೂ ಹಲವು ಏಳು-ಬೀಳುಗಳನ್ನು ಕಂಡಿದೆ. ಮೊದಲ ವಿವಾಹ ಮುರಿದ ಬಳಿಕ ಅವರು ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಪುತ್ರರು ಇದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !