ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಸಾಕಷ್ಟು ಜನರಿಗೆ ಕೈಕೊಟ್ಟಿದ್ದು, ವಿಷಯಗಳ ಬಗ್ಗೆ ಹುಡುಕೋಕಾಗದೇ ಜನ ಪರದಾಡಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದಾಗಿ ದೇಶದ ಹಲವು ಭಾಗದ ಜನರಿಗೆ ಬೆಳಗ್ಗೆಯಿಂದಲೇ ಗೂಗಲ್ ಕೈಕೊಟ್ಟಿದೆ. ಗೂಗಲ್ ಸೇವೆಗಳನ್ನು ಬಳಸಲು ಸಾಧ್ಯವಾಗಿಲ್ಲ ಎಂದು ದೂರುಗಳು ಬಂದಿವೆ.
ಒಂದೂವರೆ ಗಂಟೆವರೆಗೆ ಈ ಸಮಸ್ಯೆ ಎದುರಾಗಿದ್ದು, ಬರೋಬ್ಬರಿ 3,665ಕ್ಕೂ ಹೆಚ್ಚು ಜನ ನಮಗೆ ಸಮಸ್ಯೆಯಾಗಿದೆ ಎಂದು ವರದಿ ಮಾಡಿದ್ದಾರೆ. ಸರ್ಚ್ ಹಾಗೂ ಇನ್ನಿತರ ಕೆಲಸಗಳು ನಡೆಯುತ್ತಿಲ್ಲ, ಕೆಲಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ದೂರಿದ್ದಾರೆ.
ಇದಕ್ಕೆ ನಿಖರವಾದ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ.



