October 10, 2026
Saturday, October 10, 2026
spot_img

ಟೀಕೆಗೂ ಮಿತಿ ಇರಲಿ: ‘ಸೆರಗ ಸರ್ಸೆ’ ವಿವಾದಕ್ಕೆ ಕಿಚ್ಚನ ಫಸ್ಟ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿಚ್ಚ ಸುದೀಪ್ ಅಭಿನಯಿಸದಿದ್ದರೂ ‘ಕೆಡಿ’ ಚಿತ್ರದ ‘ಸೆರಗ ಸರ್ಸೆ’ ಹಾಡಿನ ಸುತ್ತ ನಡೆದ ವಿವಾದದ ಬಗ್ಗೆ ತಮ್ಮ ನೇರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಡಿನ ಸಾಹಿತ್ಯದ ವಿರುದ್ಧ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಟೀಕೆ ಮಾಡುವಾಗ ಸಮತೋಲನ ಅಗತ್ಯ ಎಂದು ಹೇಳಿದ್ದಾರೆ.

ಚಿತ್ರ ಬಿಡುಗಡೆ ಹಿನ್ನೆಲೆ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸುದೀಪ್, ಒಂದು ಹಾಡು ಎಲ್ಲರಿಗೂ ಇಷ್ಟವಾಗದೇ ಇರಬಹುದು. ಕೆಲವೊಮ್ಮೆ ಕೆಲವು ಪ್ರಯೋಗಗಳು ನಿರೀಕ್ಷೆಯಂತೆ ಕೆಲಸ ಮಾಡದೇ ಹೋಗಬಹುದು. ಆದರೆ ಅದನ್ನೇ ದೊಡ್ಡ ವಿವಾದವನ್ನಾಗಿ ಮಾಡಿ ವ್ಯಕ್ತಿಯನ್ನು ಗುರಿಯಾಗಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ನಿರ್ದೇಶಕ ಜೋಗಿ ಪ್ರೇಮ್ ಭಾವನಾತ್ಮಕ ಹಾಡುಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಅವರ ಸಂಪೂರ್ಣ ಕೆಲಸವನ್ನು ಮರೆತು, ಒಂದು ಹಾಡಿನ ಆಧಾರದಲ್ಲಿ ಕಠಿಣವಾಗಿ ತೀರ್ಪು ನೀಡುವುದು ನ್ಯಾಯವಲ್ಲ ಎಂದು ಸುದೀಪ್ ಹೇಳಿದರು.

ನಮ್ಮದೇ ಭಾಷೆ, ನಮ್ಮದೇ ಕಲಾವಿದರ ಬಗ್ಗೆ ಅತಿಯಾಗಿ ಕಟುವಾಗಿ ಪ್ರತಿಕ್ರಿಯಿಸುವ ಬದಲು, ತಪ್ಪಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಸುದೀಪ್ ಮನವಿ ಮಾಡಿದ್ದಾರೆ.

Must Read