June 5, 2026
Friday, June 5, 2026
spot_img

LIFE | ಹಲ್ಲುಜ್ರೋದಿಂದ ಹಿಡಿದು ಮಲಗೋ ತನಕ ಎಲ್ಲಾ ಕೆಲಸವನ್ನು ಯಾಕೆ ಅರ್ಜೆಂಟ್‌ ಅರ್ಜೆಂಟಾಗಿ ಮಾಡ್ಬೇಕು?

ಮೇಘನಾ ಶೆಟ್ಟಿ ಶಿವಮೊಗ್ಗ

ಮಲಗೋಕೆ ಲೇಟಾಯ್ತು ಬೇಗ ಬ್ರಶ್‌ ಮಾಡ್ಬೇಕು ಎಂದು ಹಲ್ಲನ್ನು ಗಸಗಸ ತಿಕ್ಕುವುದರಿಂದ ಹಿಡಿದು ಮರುದಿನ ಅರ್ಜೆಂಟಲ್ಲಿ ಎದ್ದು ಅರ್ಜೆಂಟಾಗಿ ಹಲ್ಲುಜ್ಜಿ ಓಡಿಹೋಗ್ಬೇಕು. ಒಂದಲ್ಲ, ಎರಡಲ್ಲಾ ಆಲ್ಮೋಸ್ಟ್‌ ಎಲ್ಲ ಕೆಲಸಗಳನ್ನು ಅರ್ಜೆಂಟಾಗಿಯೇ ಮಾಡ್ತೀವಿ. ತಿಂಡಿಯನ್ನು ಯಾರೋ ಕಿತ್ತುಕೊಳ್ತಾರೇನೋ ಅನ್ನೋ ಸ್ಪೀಡ್‌ನಲ್ಲಿ ತಿಂದು ಮುಗಿಸಿದ ಮೇಲೆ, ಅಷ್ಟೇ ಸ್ಪೀಡಾಗಿ ಒಂದು ಕಪ್‌ ಕಾಫಿ ಸಿಕ್ಬಿಡಬೇಕು. ಪುರುಸೊತ್ತೇ ಇಲ್ಲದಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಹೀಗ್ಯಾಕೆ ಜೀವನ ಮಾಡ್ಬೇಕು ಹೇಳಿ?

ವಾರಕ್ಕೆ ಒಂದೇ ಒಂದು ದಿನ ಎಲ್ಲವನ್ನೂ ನಿಧಾನಕ್ಕೆ ಮಾಡಿ. ನಿಧಾನಕ್ಕೆ ಅಂದ್ರೆ ಬೇಕಂತ ಆಮೆ ಥರ ಆಡೋದಲ್ಲ. ಆಯಾ ಕೆಲಸಕ್ಕೆ ಎಷ್ಟು ಸಮಯ ಬೇಕೋ ಅಷ್ಟು ಮಾತ್ರ. ಜೀವನವನ್ನು ಆಗಾಗ ಸ್ಲೋ ಡೌನ್‌ ಮಾಡಿದ್ರೆ ತುಂಬಾ ಲಾಭ ಇದೆ. ಏನು ನೋಡಿ..

ಇರೋದು ಒಂದೇ ದೇಹ ತಾನೆ ಅದನ್ನೇ ಸಾಯುವವರೆಗೂ ಸವೆಸಬೇಕು. ಹಾಗಿದ್ರೆ ಅದರ ಬಗ್ಗೆ ಪ್ರೀತಿ ಯಾಕಿಲ್ಲ? ನಿಮ್ಮ ದೈಹಿಕ ಆರೋಗ್ಯ ಸುಧಾರಿಸುತ್ತದೆ. ಲೈಫನ್ನು ಫಸ್ಟ್‌ ಸ್ಲೋ ಮಾಡೋದು ಕಲಿತುಕೊಳ್ಳಿ.

ಮಾನಸಿಕ ಆರೋಗ್ಯದ ಬಗ್ಗೆ ನಿಮಗೆ ಗಮನ ಇಲ್ವಾ? ಕ್ರೋನಿಕ್‌ ಸ್ಟ್ರೆಸ್‌ನಿಂದ ಎಷ್ಟೋ ಮಂದಿ ಜೀವನವನ್ನೇ ಮುಗಿಸಿದ್ದಾರೆ. ಕಾರ್ಟಿಸಾಲ್‌ ( ಸ್ಟ್ರೆಸ್‌ ಹಾರ್ಮೋನ್‌) ಲೆವೆಲ್‌ ನಿಮ್ಮ ನರ್ವಸ್‌ ಸಿಸ್ಟಮ್‌ನ್ನು ಹಾಳು ಮಾಡುತ್ತದೆ.

ನೀವು ಎಲ್ಲವನ್ನೂ ನಿಧಾನಕ್ಕೆ ಮಾಡೋಕೆ ಶುರುಮಾಡಿದ ನಂತರ ನಿಮ್ಮ ಕೆಲಸದಲ್ಲಿ ಬದಲಾವಣೆ ಕಾಣುತ್ತದೆ. ಹೈ ಕ್ವಾಲಿಟಿ ಕೆಲಸ ಹಾಗೂ ನಿರ್ಧಾರಗಳಲ್ಲಿ ಕ್ಲಾರಿಟಿ ಬರುತ್ತದೆ.

ನಿಧಾನಕ್ಕೆ ಜೀವಿಸುವುದರಿಂದ ಸ್ನೇಹಿತರು, ಕುಟುಂಬಕ್ಕೆ ಹಾಗೂ ನಿಮಗೆ ಹೆಚ್ಚು ಸಮಯ ಸಿಗುತ್ತದೆ. ಬೇರೆಯವರ ನೋವಿಗೆ ಸ್ಪಂದಿಸುವ ಗುಣ ನಿಮ್ಮದಾಗುತ್ತದೆ.

ಜೀವನದ ಬಗ್ಗೆ ಅದ್ಯಾವುದೋ ಹೆಸರಿಲ್ಲದ ಖುಷಿ ಆರಂಭವಾಗುತ್ತದೆ. ಆಫೀಸಿನಲ್ಲಿ ನೀವು ಕುಟ್ಟುವ ಕೀ ಬೋರ್ಡ್‌ ಕೂಡ ಬ್ಯೂಟಿಫುಲ್‌ ಆಗಿ ಕಾಣುತ್ತದೆ. ಜೀವ ಹಾಗೂ ಜೀವನವನ್ನು ಪ್ರೀತಿಸ್ತೀರಿ.

ನಿಮಗೆ ಲೈಫ್‌ನಲ್ಲಿ ಏನು ಬೇಕು, ಏನನ್ನು ಪಡೆಯೋಕೆ ಪ್ರಯತ್ನ ಮಾಡ್ತಿದ್ದೀರಿ. ನಿಮ್ಮ ಸುತ್ತಮುತ್ತ ಇರುವ ಜನ ಎಂತವರು ಎನ್ನುವ ಕ್ಲಾರಿಟಿ ಸಿಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !