ಬಣ್ಣಗಳು, ಭಾವನೆಗಳು ಮತ್ತು ಸೃಜನಶೀಲತೆಯ ಸಂಭ್ರಮವೇ ಕಲೆ. ಈ ಕಲೆಯ ಮಹತ್ವವನ್ನು ಜಗತ್ತಿಗೆ ನೆನಪಿಸಲು ಪ್ರತಿವರ್ಷ ಏಪ್ರಿಲ್ 15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಕಲಾವಿದರ ಸೃಜನಶೀಲತೆಗೆ ಗೌರವ ಸಲ್ಲಿಸುವುದರ ಜೊತೆಗೆ ಸಮಾಜದಲ್ಲಿ ಕಲೆಯ ಪಾತ್ರವನ್ನು ಸಾರುವ ದಿನ ಇದಾಗಿದೆ.
ಇತಿಹಾಸ
ವಿಶ್ವ ಕಲಾ ದಿನದ ಆಚರಣೆಗೆ ಮೊದಲ ಬಾರಿಗೆ 2012ರಲ್ಲಿ ಚಾಲನೆ ದೊರೆಯಿತು. ಈ ದಿನವನ್ನು ಮೊದಲಿಗೆ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಟ್ (IAA) ಘೋಷಿಸಿತು. ನಂತರ 2019ರಲ್ಲಿ UNESCO ತನ್ನ ಮಹಾಸಭೆಯಲ್ಲಿ ಇದನ್ನು ಅಧಿಕೃತವಾಗಿ ಮಾನ್ಯತೆ ನೀಡಿತು. ಈ ದಿನದ ಉದ್ದೇಶ ಕಲೆಯ ಅಭಿವೃದ್ಧಿ, ಪ್ರಸಾರ ಮತ್ತು ಎಲ್ಲರಿಗೂ ಅದರ ಆನಂದವನ್ನು ತಲುಪಿಸುವುದಾಗಿದೆ.
ಏಪ್ರಿಲ್ 15ರ ವಿಶೇಷತೆ
ಏಪ್ರಿಲ್ 15ರಂದು ವಿಶ್ವ ಕಲಾ ದಿನ ಆಚರಿಸುವ ಪ್ರಮುಖ ಕಾರಣ ಲಿಯೊನಾರ್ಡೊ ಡಾ ವಿನ್ಸಿ ಅವರ ಜನ್ಮ ದಿನ. ಚಿತ್ರಕಲೆ, ವಿಜ್ಞಾನ ಮತ್ತು ಸೃಜನಶೀಲತೆಯ ಪ್ರತೀಕವಾಗಿದ್ದ ಲಿಯೊನಾರ್ಡೊ ಡಾ ವಿನ್ಸಿ ವಿಶ್ವದ ಕಲಾವಿದರಿಗೆ ಸ್ಫೂರ್ತಿಯ ವ್ಯಕ್ತಿ. ಅವರ ಗೌರವಾರ್ಥ ಈ ದಿನವನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:
ಈ ದಿನದ ಮಹತ್ವ
ವಿಶ್ವ ಕಲಾ ದಿನ ಕೇವಲ ಕಲಾವಿದರ ದಿನವಲ್ಲ. ಇದು ಸೃಜನಶೀಲತೆಯನ್ನು ಉತ್ತೇಜಿಸುವ ದಿನ. ಚಿತ್ರಕಲೆ, ಸಂಗೀತ, ನೃತ್ಯ, ಶಿಲ್ಪಕಲೆ ಸೇರಿದಂತೆ ಎಲ್ಲ ಕಲಾ ರೂಪಗಳಿಗೆ ಗೌರವ ನೀಡುವ ದಿನವಾಗಿದೆ. ಶಾಲೆಗಳಲ್ಲಿ ಆರ್ಟ್ ಎಜುಕೇಶನ್‌ಗೂ ಈ ದಿನ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಕಲೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂಬ ಸಂದೇಶವನ್ನೂ ಈ ದಿನ ಸಾರುತ್ತದೆ.
ಕಲೆ ಎಂದರೆ ಕೇವಲ ಮನರಂಜನೆ ಅಲ್ಲ, ಅದು ಭಾವನೆಗಳ ಭಾಷೆ. ವಿಶ್ವ ಕಲಾ ದಿನ ನಮಗೆ ಸೃಜನಶೀಲತೆಯ ಮೌಲ್ಯವನ್ನು ನೆನಪಿಸುತ್ತದೆ.



