October 7, 2026
Wednesday, October 7, 2026
spot_img

HEALTH | ದಿನವೂ ಖಾಲಿ ಹೊಟ್ಟೆಯಲ್ಲಿ ಒಂದೆರಡು ಪೀಸ್‌ ಪಪಾಯ ತಿಂದುಬಿಡಿ, ಯಾಕೆ ಗೊತ್ತಾ?

ಬೆಳಗ್ಗೆ ಖಾಲಿ ಹೊಟ್ಟೆಗೆ ನಿತ್ಯವೂ ಎರಡು ಪೀಸ್‌ ಪಪಾಯ ತಿಂದುಬಿಡಿ. ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭ ಇದೆ. ಏನೆಲ್ಲಾ ಲಾಭ ನೋಡಿ..

ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಬ್ಲೋಟಿಂಗ್‌ ಸಮಸ್ಯೆ ಎದುರಾಗೋದಿಲ್ಲ. ಮಲಬದ್ಧತೆ ನಿವಾರಣೆಯಾಗುತ್ತದೆ.

ಇದರಲ್ಲಿ ಹೈ ಫೈಬರ್‌ ಇದೆ. ಇದು ನಿಮ್ಮ ಮಲಬದ್ಧತೆ ಹಾಗೂ ಹೊಟ್ಟೆನೋವು ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಕ್ಕೆ ಹಾಕುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇದರಲ್ಲಿ ಕ್ಯಾಲೋರಿ ಕಡಿಮೆ ಇದೆ. ತೂಕ ಇಳಿಕೆಗೆ ಸಹಕಾರಿಯಾಗಲಿದೆ.

ಮೂರು ನಾಲ್ಕು ಪೀಸ್‌ಗಳಿಗಿಂತ ಹೆಚ್ಚು ತಿನ್ನಬೇಡಿ. ಕೆಲವರಿಗೆ ಬೇಧಿ ಅಥವಾ ಹೊಟ್ಟೆ ನೋವು ಬರಬಹುದು.

Must Read